ಅನಾದಿಯ ಬೆಳಗು ಆದಿಯಲ್ಲುದಯವಾಗಿ
ಆದಿಯ ಕುಳಗತಿಯ ಕೆಡಿಸಿತ್ತು ನೋಡಾ!
ಮತ್ತಾದಿಯ ಮುಖವನರಿಸಿತ್ತು.
ಮಥನದಿಂದಾಗಿ ಬಂದು ಎನ್ನ ಕಂಗಳ ಮುಂದೆ ನಿಂದು,
ಕಾರಣನಾಗಿ ಕಾರ್ಯದಿಂದೆ
ಸಕಲ ಸಂಜನಿತ ಸುಖಮಯ ವ್ಯಾಪಾರಗೊಂಡು
ತನ್ನ ಮೂಲದ್ರವ್ಯಪ್ರಕಾಶದೊಳಪ್ಪಿಕೊಂಡನು
ಎನ್ನ ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Anādiya beḷagu ādiyalludayavāgi
ādiya kuḷagatiya keḍisittu nōḍā!
Mattādiya mukhavanarisittu.
Mathanadindāgi bandu enna kaṅgaḷa munde nindu,
kāraṇanāgi kāryadinde
sakala san̄janita sukhamaya vyāpāragoṇḍu
tanna mūladravyaprakāśadoḷappikoṇḍanu
enna guruniran̄jana cannabasavaliṅga.
ಸ್ಥಲ -
ಪ್ರಾಣಲಿಂಗಿಯ ಐಕ್ಯಸ್ಥಲ