Index   ವಚನ - 571    Search  
 
ಅಖಂಡಬೆಳಗಿನೊಳಗಿರ್ದ ಅನುಪಮ ಶರಣನ ಕರಸ್ಥಲದಲ್ಲಿ ಕಾಣಿಸಿಕೊಂಬ ಜ್ಯೋತಿರ್ಮಯಲಿಂಗವು ತನ್ನ ವಿನೋದಕಾರಣ ಆ ಶರಣನ ಶ್ರದ್ಧೆಗೆ ಆಚಾರಲಿಂಗವಾಗಿ, ನಿಷ್ಠೆಗೆ ಗುರುಲಿಂಗವಾಗಿ, ಸಾವಧಾನಕ್ಕೆ ಶಿವಲಿಂಗವಾಗಿ, ಅನುಭಾವಕ್ಕೆ ಪ್ರಾಣಲಿಂಗವಾಗಿ, ತನ್ನ ಬೆಳಗಿನೊಳಡಗಿಸಿಕೊಂಡು ಆನಂದಭಕ್ತಿಯ ನೋಡುತಿರ್ದ ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿ.