Index   ವಚನ - 575    Search  
 
ತನುವಿನಮೋಹ ತರಹರವಾಗಿ ಮನದ ರಭಸ ಮುಂದುವರಿದು ಪ್ರಾಣನಪ್ರಕೃತಿಪ್ರವೇಶದೊಳು ಭಾವಭ್ರಾಂತಿಗೊಂಡು ತನ್ನ ಸ್ವಭಾವನರಿಯದೆ, ಸುಲಲಿತ ಶರಣರೆನಿಸಿಕೊಂಬ ಅಬದ್ಧ ಮೂಢರ ಗುರುನಿರಂಜನ ಚನ್ನಬಸವಲಿಂಗದಲ್ಲಿ ನೆನೆಯಲಾಗದು.