Index   ವಚನ - 585    Search  
 
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡಲಿಂಗವನು ಧರಿಸಿಪ್ಪ ಇಂದ್ರಿಯಾನಂದ ಪ್ರಾಣಾನಂದ ಜ್ಞಾನಾನಂದ ಭಾವಾನಂದ ತೂರ್ಯಾನಂದ ಮಹದಾನಂದಸ್ವರೂಪವಾದ ಶರಣನು, ಕಾರಣಕ್ಕೆ ಕಾರ್ಯನಾಗಿ ಲೋಕೋಪಕಾರ ಚರಿಸುವನಲ್ಲದೆ ಪಂಚಭೂತಕಾಯದ ಪಂಚೇಂದ್ರಿಯವಿಷಯಪ್ರಕೃತಿಯೊಳು ಮುಕ್ತನಾಗಿ ಕಾಮಾದಿ ಷಡ್ವರ್ಗಂಗಳಂತರಂಗದಲ್ಲಿ ಮಡಗಿ, ಕೊಟ್ಟವರ ಹೊಗಳಿ, ಕೊಡದವರ ಬೊಗಳಿ, ತಟ್ಟಿ ಬಾಗಿಲಲರಸುವ ತುಡುಗ ಶುನಕನಂತೆ ಧನವನಿತೆಯರಾಸೆ ತಲೆಗೇರಿ ಮನೆಮನೆ ಪಳ್ಳಿ ಪಟ್ಟಣವ ಹುಡುಕುತ್ತ, ಒಡಲ ಹೊರೆದು ಗುಡಿ ಮಳಿಗೆ ಮಠವ ಸೇರಿ ಸತ್ತು ಹೋಗಬಂದ ಮಿಥ್ಯವೇಷಧಾರಿಗಳಂತಲ್ಲ ನೋಡಾ ನಿಮ್ಮ ಶರಣ. ಗುರುನಿರಂಜನ ಚನ್ನಬಸವಲಿಂಗದ ಅಭಿಮಾನಿ ಕಾಣಾ.