ಲೋಕಮಚ್ಚು ನಡೆಯ ಬಲಿಸುವನು,
ಲೋಕಮಚ್ಚು ನುಡಿಯ ಕಲಿವನು.
ಲೋಕದ ಮಚ್ಚು ಸೂತಕಾದಿ ಸಕಲಸನ್ನಿಹಿತನಾಗಿ
ಪಾತಕದಲ್ಲಿ ಮುಳುಗಿ ಹೋಗುವ ವೇಷಗಳ್ಳನಂತಲ್ಲ.
ಮತ್ತೆಂತೆಂದಡೆ, ಲಿಂಗಮಚ್ಚು ನಡೆಸಾಧಿಸುವ,
ಲಿಂಗಮಚ್ಚು ನುಡಿಯ ಗಳಿಸುವ,
ಲಿಂಗಮಚ್ಚು ಸೂತಕಪಾತಕಂಗಳ ವಿಸರ್ಜಿಸಿ
ಅಜಾತ ಅಪ್ರತಿಮನಾಗಿಪ್ಪ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Lōkamaccu naḍeya balisuvanu,
lōkamaccu nuḍiya kalivanu.
Lōkada maccu sūtakādi sakalasannihitanāgi
pātakadalli muḷugi hōguva vēṣagaḷḷanantalla.
Mattentendaḍe, liṅgamaccu naḍesādhisuva,
liṅgamaccu nuḍiya gaḷisuva,
liṅgamaccu sūtakapātakaṅgaḷa visarjisi
ajāta apratimanāgippa
guruniran̄jana cannabasavaliṅgā nim'ma śaraṇa.