ಕಾಣಬಾರದ ಕಳೆ ಕಣ್ಣಿಂಗೆ ಗೋಚರಿಸಿದಲ್ಲಿ
ಕಳೆಯಬಾರದ ಕಲ್ಪನೆ ಕಳಚಿತ್ತು ನೋಡಾ.
ಬರಬಾರದ ಬರವು ಬಂದು ನಿಂದಲ್ಲಿ.
ಆಗಬಾರದ ಭೋಗ ಆದುದು ನೋಡಾ.
ಹುಟ್ಟಬಾರದ ಹುಟ್ಟು ಹುಟ್ಟಿಬಂದುದಾಗಿ
ನೆಟ್ಟನೆ ಬಂದು ಕೈಹಿಡಿದುದು ನೋಡಾ.
ಆಡಬಾರದ ಆಟ ಬಂದುದಾಗಿ ಮಾಡಬಾರದ
ಸ್ನೇಹ ಹೆಚ್ಚಿತ್ತು ನೋಡಾ.
ಹೇಳಬಾರದ ಸುಖವು ಹೇಳಿ ಸಾರಿತ್ತಾಗಿ
ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗ
ತಾನೆ ಶರಣ ನೋಡಾ.
Art
Manuscript
Music
Courtesy:
Transliteration
Kāṇabārada kaḷe kaṇṇiṅge gōcarisidalli
kaḷeyabārada kalpane kaḷacittu nōḍā.
Barabārada baravu bandu nindalli.
Āgabārada bhōga ādudu nōḍā.
Huṭṭabārada huṭṭu huṭṭibandudāgi
neṭṭane bandu kaihiḍidudu nōḍā.
Āḍabārada āṭa bandudāgi māḍabārada
snēha heccittu nōḍā.
Hēḷabārada sukhavu hēḷi sārittāgi
apratima guruniran̄jana cannabasavaliṅga
tāne śaraṇa nōḍā.