ಆದಿಗುರುವಿನ ಕೈಯಿಂದೆ ಅನಾದಿಲಿಂಗವ ಪಡೆದವರೆಂದು
ಭೇದಾಭೇದವನರಿಯದೆ ಸಾಧಿಸುವರು ತನುವಿಡಿದು ಇಂದ್ರಿಯ ಸುಖವ ;
ಭೇದಿಸುವರು ಮನವಿಡಿದು ಕಾರಣದ ಸುಖವ ;
ಆವೇದಿಸುವರು ಪ್ರಾಣವಿಡಿದು ವಿಷಯದ ಸುಖವ.
ಇದು ಕಾರಣ ಗುರುವೆಲ್ಲಿಹದೋ! ಲಿಂಗವೆಲ್ಲಿಹದೋ!
ಜಂಗಮವೆಲ್ಲಿಹದೋ! ಪ್ರಸಾದವೆಲ್ಲಿಹದೋ!
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಮುಕ್ತಿಯೆಲ್ಲಿಹದೋ!
Art
Manuscript
Music
Courtesy:
Transliteration
Ādiguruvina kaiyinde anādiliṅgava paḍedavarendu
bhēdābhēdavanariyade sādhisuvaru tanuviḍidu indriya sukhava;
bhēdisuvaru manaviḍidu kāraṇada sukhava;
āvēdisuvaru prāṇaviḍidu viṣayada sukhava.
Idu kāraṇa guruvellihadō! Liṅgavellihadō!
Jaṅgamavellihadō! Prasādavellihadō!
Guruniran̄jana cannabasavaliṅgadalli
muktiyellihadō!