Index   ವಚನ - 602    Search  
 
ತಥ್ಯತಾನೆಂಬ ನಿತ್ಯದ ನಿಲುವ ಮರೆದು, ಮಿಥ್ಯಮಂದಿರದ ಸತ್ಯಸಂಸ್ಕೃತಿಯೊಳೊತ್ತೆಗೆಯ್ದು, ಕರ್ತು ಗುರುಲಿಂಗಜಂಗಮದ ಅನುವಿನ ಗೊತ್ತು ಸುಟ್ಟು ಮಾಡುವ ಬಡವರಿಗೆ ಮತ್ತೆ ಇನ್ನೆಲ್ಲಿಯದು ಹೇಳಾ ಲಿಂಗಶರಣಸ್ಥಲ ಗುರುನಿರಂಜನ ಚನ್ನಬಸವಲಿಂಗಾ.