Index   ವಚನ - 606    Search  
 
ಸತ್ಯಶರಣರ ಗೊತ್ತು ಹೇಳಿ ನಡೆವ ಮಿಥ್ಯ ಜನರುಗಳನೇನೆಂಬೆನಯ್ಯಾ. ನಡೆಯೊಂದು ಕಡೆಗೆ ನುಡಿಯೊಂದು ಕಡೆಗೆ ನೋಟವೊಂದು ಕಡೆಗೆ ಮಾಟವೊಂದು ಕಡೆಗೆ ವಂಚನೆಯ ಒಳಗಿಟ್ಟು ಮಿಂಚುತ ಮಾತನಾಡುತ್ತ ಕಾಗೆಯ ಬಳಗದಂತೆ ಕೂಡಿ ಕೂಗಿ ಕಡೆಗೆ ಹೋಗಿ ಬೀಳುವ ಕಪಟಗಳ್ಳರಿಗೆತ್ತಣ ಶರಣಸ್ಥಲವಯ್ಯಾ ಗುರುನಿರಂಜನ ಚನ್ನಬಸವಲಿಂಗಾ.