ಹುಟ್ಟಿಬಂದ ಮನೆಯ ಸುಟ್ಟು
ತಾಯಿಯ ಸಂಗ ಮಾಡಿದರೊಂದು ಕೂಸು ಹುಟ್ಟಿ
ಕೈಯೊಳಗೆ ನಿಂದು ಮೈಯನೆಲ್ಲ ಮುಟ್ಟಿತ್ತು ಇದೇನು ಹೇಳಾ!
ನಾ ನೋಡಿ ಹೆಣ್ಣಾಗಿ ಬಗೆಬಗೆಯಾಟದಿಂದೆ ಸೊಗಸು ತೋರಿದರೆ
ನೆಲಮನೆಯೊಳಿಪ್ಪ ಬಳಿವಿಡಿಯೆ ಭೋಗವ ನೆಗಹಿ ತೋರಿದನು
ಮೇಲುಮನೆಯಲ್ಲಿ ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Huṭṭibanda maneya suṭṭu
tāyiya saṅga māḍidarondu kūsu huṭṭi
kaiyoḷage nindu maiyanella muṭṭittu idēnu hēḷā!
Nā nōḍi heṇṇāgi bagebageyāṭadinde sogasu tōridare
nelamaneyoḷippa baḷiviḍiye bhōgava negahi tōridanu
mēlumaneyalli guruniran̄jana cannabasavaliṅga.