ಸತ್ತು ಬದುಕಿ ಬಾಳಿದ ಮಿಥ್ಯಕಾಯನಲ್ಲದ
ಸತ್ತು ಬದುಕಿ ಬಾಳಿದ ಚಿತ್ಕಾಯ ಕಾಣಾ.
ಗತಿಮತಿ ಗಮನವಿಡಿದು ಕ್ಷಯಪದ ಸಾಧ್ಯನಲ್ಲದ
ಗತಿಮತಿ ಗಮನವಿಡಿದು ಅಕ್ಷಯಪದ ಸಾಧ್ಯ ಕಾಣಾ.
ನಾದ ಬಿಂದು ಕಳೆಯ ಮುಳುಗಿಸಿ ಬಾಧೆಯನರಿಯದ
ನಾದ ಬಿಂದು ಕಳೆಯ ಮುಳುಗಿಸಿ ಅನಾದಿಯನರಿದ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಶರಣ ಕಾಣಾ.
Art
Manuscript
Music
Courtesy:
Transliteration
Sattu baduki bāḷida mithyakāyanallada
sattu baduki bāḷida citkāya kāṇā.
Gatimati gamanaviḍidu kṣayapada sādhyanallada
gatimati gamanaviḍidu akṣayapada sādhya kāṇā.
Nāda bindu kaḷeya muḷugisi bādheyanariyada
nāda bindu kaḷeya muḷugisi anādiyanarida kāṇā.
Guruniran̄jana cannabasavaliṅgā,
nim'ma śaraṇa kāṇā.