ಪಂಕ, ಶಿಲೆ, ಸ್ಪಟಿಕ, ತಾಂಬ್ರ, ಲೋಹ, ತಾರೆ, ಹೇಮಾದಿಗಳಿಂದೆ
ಮಾಡಿ ಮಾಡುವ ತೋರಿಕೆಯೆಲ್ಲ ಲಿಂಗವೇ ? ಅಲ್ಲ.
ಅವೇ ಲಿಂಗವೆಂದು ನಿಯಮವಿಡಿದು
ಇದೇ ಪತ್ರಿ ಇದೇ ಪುಷ್ಪ ಇದೇ ನೀರು ಆಗಬೇಕೆಂದು
ಸಾಧಿಸುದ ಭೇದಜೀವಜಂತುಗಳಿಗೆ
ಅದೇ ಫಲದಿಂದತ್ತ ಭವ ತಪ್ಪದು ಕಾಣಾ,
ಸಾಧ್ಯ ಸಾಧ್ಯ ಅನುಪಮಲಿಂಗವ ಸಾಧಿಸಿ
ಅಂಗ ಮನ ಭಾವ ಸಂಗಸಂಯೋಗಿ ತಾನೆ
ಗುರುನಿರಂಜನ ಚನ್ನಬಸವಲಿಂಗವಲ್ಲದೆ
ಬೇರಿಲ್ಲ ಕಾಣಾ ಶರಣಂಗೆ.