Index   ವಚನ - 633    Search  
 
ಭೂಮಿಯ ಹಿಡಿದು ಭೂಮಿಯ ಸುಖವನರಿಯರಯ್ಯಾ ಸತ್ಕ್ರಿಯಾ ಸಂಬಂಧವಾಗಿ. ಹೆಣ್ಣ ಹಿಡಿದು ಹೆಣ್ಣಿನ ಸುಖವನರಿಯರಯ್ಯಾ ಸಮ್ಯಕ್‍ಜ್ಞಾನಸನ್ನಿಹಿತವಾಗಿ. ಹೊನ್ನ ಹಿಡಿದು ಹೊನ್ನಿನ ಸುಖವನರಿಯರಯ್ಯಾ ಮಹಾನುಭಾವಸಮೇತವಾಗಿ. ಈ ತ್ರಿವಿಧದ ಸುಖವ ಗುರುನಿರಂಜನ ಚನ್ನಬಸವಲಿಂಗಕ್ಕಿತ್ತು ನಿಃಸಂಸಾರಿಗಳಯ್ಯಾ ನಿಮ್ಮ ಶರಣರು.