Index   ವಚನ - 635    Search  
 
ಮೂರು ಮನೆಯೊಳು ಮೂರು ನಾಮವ ಹೊತ್ತು ಮೂರವಸ್ಥೆಯಲ್ಲಿ ಕೇರಿಕೇರಿಯ ಹೊಕ್ಕು ಸೂರೆಗೊಂಬ ಕುಲಗೇಡಿಯ ನೋಡಾ! ತಾಯಂಶಿಕನೊಬ್ಬ ಮಗ ಹಾರುವ ಕಾಣಾ. ಆ ಹಾರುವನ ತಲೆಯೆತ್ತಿ ತಲೆಯ ಮಾಣಿಕವ ಮುದ್ದಾಡಬಲ್ಲರೆ ಸಿದ್ಧಶರಣ ಸಹಜ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.