Index   ವಚನ - 644    Search  
 
ಹುಟ್ಟಿಬಂದುದರಿಯದೆ ಕೆಟ್ಟು ಬಾಳುವ ಗಂಜಳದ ಗಬ್ಬಿನೊಳು ಬಿದ್ದು ಮುಂದೆ ನರಕದ ಗತಿಯ ತಿಳಿಯದೆ ಸತ್ಯಶರಣರ ಗೊತ್ತನರಿದು ಉಚಿತಾಚಾರವಿಡಿದು ನಡೆವವರ ಕಂಡು ನುಡಿಯಲ್ಲಿ ಜರಿದು ನಡೆಯಲ್ಲಿ ವಿಘ್ನದೋರಿ ನೋಯಿಸುವವರ ಸುಳುಹನೆನ್ನ ದಾರಿಯಲ್ಲಿ ಕಾಣದಂತೆ ಮಾಡಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ.