Index   ವಚನ - 646    Search  
 
ಕಾಯವನರಿಯದೆ ಕಾಯದಲ್ಲಿರಿಸಿ ಕಾಯುವ ಕಂಡರೆ ಶರಣನೆಂಬುವರು. ಮನವರಿಯದೆ ಮನದಲ್ಲಿರಿಸಿ ಮನವ ಕಂಡರೆ ಶರಣನೆಂಬುವರು. ಭಾವವನರಿಯದೆ ಭಾವದಲ್ಲಿರಿಸಿ ಭಾವವ ಕಂಡರ ಶರಣನೆಂಬುವರು. ತನ್ನನರಿಯದೆ ತನ್ನಲ್ಲಿರಿಸಿ ತನ್ನಕಂಡರೆ ಶರಣನೆಂಬುವರು ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿಮ್ಮ ಶರಣರು.