Index   ವಚನ - 676    Search  
 
ಅಯ್ಯಾ, ಎನ್ನಲ್ಲಿ ವಂಚನೆಗಿಂಬಿಡಲೆಡೆಯಿಲ್ಲ ಮನವೆಂಬ ಸುಳುಹಿಲ್ಲ ಲಿಂಗಕ್ಕೆ ಆಲಯವಾಗಿತ್ತಾಗಿ. ಅಯ್ಯಾ, ಎನ್ನಲ್ಲಿ ಭಿನ್ನಭಾವಕ್ಕನುವಿಲ್ಲ ಮಹಾನುಭಾವವಾಗಿ ಮಹದಲ್ಲೆರಕವಾಯಿತ್ತಾಗಿ. ಅಯ್ಯಾ, ಎನ್ನಲ್ಲಿ ಜ್ಞಾನವಿಡಿದು ನಿನ್ನ ನೋಡಿ ಆಲಿಂಗಿಸಬೇಕೆಂಬ ಅನುವಿಲ್ಲ ಗುರುನಿರಂಜನ ಚನ್ನಬಸವಲಿಂಗವೆನ್ನನಾವರಿಸಿಕೊಂಡಿರ್ದನಾಗಿ.