Index   ವಚನ - 678    Search  
 
ಎನ್ನ ಮನೆಯ ರಮಣನ ಮಾಧುರ್ಯವನೇನೆಂದು ಹೇಳಲಮ್ಮ. ನೆಲಮನೆಯಲ್ಲಿ ನೆರೆವ ಸುಖವ ಕಂಡವರರಿಯರು. ಮನಮಂದಿರದಲ್ಲಿ ಕೂಡುವ ಸುಖವ ವಾಗದ್ವೈತರೇನಬಲ್ಲರು? ಸಿಖಿಮಂಟಪದಲ್ಲಿ ಸುರತದಸುಖವ ಕಣ್ಣುಗೆಟ್ಟನಾರಿಯರೇನಬಲ್ಲರು? ಪವನಗೃಹದಲ್ಲಿ ನೆರೆವ ಸೌಖ್ಯವ ಅವರಿವರರಿಯರು. ಗಗನಮಂಟಪದಲ್ಲಿ ಸೊಗಸಿನಿಂದ ನೆರೆವ ಕುಶಲವ ಕೆಳಗಳವರರಿಯರು. ಮೇಲುಮಂದಿರ ಮಧ್ಯಮಂಟಪದಲ್ಲಿ ಲೋಲಸಂಯೋಗವ ಕಾಲಕೆಳಗಲವರರಿಯರು. ಗುರುನಿರಂಜನ ಚನ್ನಬಸವಲಿಂಗದ ನಿಜಾಂಗನೆಯಾನಲ್ಲದೆ, ಹೋಗಿಬರುವ ಸೋಗಿನ ನಾರಿಯವರೆತ್ತ ಬಲ್ಲರು, ಹೇಳಾಯಮ್ಮ.