Index   ವಚನ - 687    Search  
 
ಆಚಾರಂಗವಾಗಿ ಅರುಹೇ ಪ್ರಾಣವಾಗಿ ಮಹಾಜ್ಞಾನಾನುಭಾವದಲ್ಲಿ ತರಹರವಾದ ಶರಣಂಗೆ ಮಾಡಲಿಲ್ಲ ಮಾಡದಿರಲಿಲ್ಲ, ನೋಡಲಿಲ್ಲ ನೋಡದಿರಲಿಲ್ಲ, ಕೂಡಲಿಲ್ಲ ಕೂಡದಿರಲಿಲ್ಲ ಗುರುನಿರಂಜನ ಚನ್ನಬಸವಲಿಂಗ ತಾನಾಗಿರ್ದ ಕಾರಣ.