ಒಳಹೊರಗೆ ತಂದು ಉಲಿದುರಿವ ಸಂಪತ್ತವನರಿವಡೆ
ಹಿಂದಣ ಸಿರಿಸುಖಗಳಿಗಳವಲ್ಲ ಕಾಣಾ.
ಹೊರಗೊಳಗೆ ತಂದು ಉಲಿದುರಿವ ಸಂಪತ್ತವನರಿವಡೆ
ಹೋಗಿ ಬಂದಿರುವ ಪರಿಸುಖಿಗಳಿಗಳವಲ್ಲ ಕಾಣಾ.
ಮತ್ತೆಂತೆಂದೊಡೆ, ಹಾಸಿದ ಶರಗ ಹಾಸದ ಭಾಷೆಬದ್ಧ
ಭಾವಜ್ಞರರಿವರು ನೋಡಾ
ನಿಮ್ಮ ಶರಣರ ಘನವ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Oḷahorage tandu uliduriva sampattavanarivaḍe
hindaṇa sirisukhagaḷigaḷavalla kāṇā.
Horagoḷage tandu uliduriva sampattavanarivaḍe
hōgi bandiruva parisukhigaḷigaḷavalla kāṇā.
Mattentendoḍe, hāsida śaraga hāsada bhāṣebad'dha
bhāvajñararivaru nōḍā
nim'ma śaraṇara ghanava guruniran̄jana
cannabasavaliṅgā.