ಆದಿ ಮಧ್ಯ ಅವಸಾನವನರಿದು
ಅಪ್ರತಿಮಲಿಂಗಸನ್ನಿಹಿತನಾದ ಶರಣ
ಒಳಗೆಂಬ ಕಳವಳವನರಿಯ.
ಪಂಚಾಚಾರಸ್ವರೂಪ ಕಂಗಳು ಹಿಂಗದಿರ್ದುದಾಗಿ
ಹೊರಗೆಂಬ ಸಟೆಭಾವ ದಿಟವಿಲ್ಲ.
ಪ್ರಾಣಲಿಂಗವೇದಿ ಪರಿಪೂರ್ಣ ತಾನಾಗಿ
ಕಂಡರ್ಪಿಸಿಕೊಂಡು ಸುಖಿಸಬೇಕೆಂಬ ಸಂಕಲ್ಪ ಸಂವಿತ್ತನಲ್ಲ.
ಗುರುನಿರಂಜನ ಚನ್ನಬಸವಲಿಂಗವೆಂಬ ಅಖಂಡಪ್ರಸಾದಕ್ಕೆ
ಅಂಗವಾಗಿರ್ದ ಅನುಪಮಪ್ರಸಾದಿ ಶರಣ.
Art
Manuscript
Music
Courtesy:
Transliteration
Ādi madhya avasānavanaridu
apratimaliṅgasannihitanāda śaraṇa
oḷagemba kaḷavaḷavanariya.
Pan̄cācārasvarūpa kaṅgaḷu hiṅgadirdudāgi
horagemba saṭebhāva diṭavilla.
Prāṇaliṅgavēdi paripūrṇa tānāgi
kaṇḍarpisikoṇḍu sukhisabēkemba saṅkalpa sanvittanalla.
Guruniran̄jana cannabasavaliṅgavemba akhaṇḍaprasādakke
aṅgavāgirda anupamaprasādi śaraṇa.