Index   ವಚನ - 727    Search  
 
ಅಯ್ಯಾ, ನಾನು ಗುರುಭಕ್ತಿಯ ಮಾಡುವನಲ್ಲ. ನಾನು ಲಿಂಗಭಕ್ತಿಯ ಮಾಡುವನಲ್ಲ. ನಾನು ಜಂಗಮಭಕ್ತಿಯ ಮಾಡುವನಲ್ಲ. ನಾನು ಪ್ರಸಾದಭಕ್ತಿಯ ಮಾಡುವನಲ್ಲ. ನಾನು ಚತುರ್ವಿಧಸಾರಾಯ ಪ್ರಸಾದಕಾಣದ ಗುರುನಿರಂಜನ ಚನ್ನಬಸವಲಿಂಗ ಪ್ರಸಾದಕ್ಕಂಗವಾಗಿ ಅರಿಯದಿರ್ದೆ ಕಾಣಾ.