ಅಯ್ಯಾ, ಎನ್ನ ಮಂದಿರದಲ್ಲಿ ಬಸವಣ್ಣನ ಮಹಾನುಭಾವಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!
ಎನ್ನ ಮಂದಿರದಲ್ಲಿ ಮಡಿವಾಳಯ್ಯನ ಚಿದ್ರಸಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!
ಎನ್ನ ಮಂದಿರದಲ್ಲಿ ಚನ್ನಬಸವಣ್ಣನ ಚಿದ್ರೂಪಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!
ಎನ್ನ ಮಂದಿರದಲ್ಲಿ ಸಿದ್ಧರಾಮಯ್ಯನ
ಚಿತ್ಕಲಾಸೋಂಕಿನ ಶುದ್ಧಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!
ಎನ್ನ ಮಂದಿರದಲ್ಲಿ ಪ್ರಭುದೇವರ ಚಿದಾನಂದಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!
ಎನ್ನ ಮಂದಿರದಲ್ಲಿ ಅಜಗಣ್ಣನ ಮಹದಾನಂದಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!
ಅಯ್ಯಾ, ಗುರುನಿರಂಜನ ಚನ್ನಬಸವಲಿಂಗಾ
ಎನ್ನ ಮಂದಿರದಲ್ಲಿ ತೆರಹಿಲ್ಲದೆ ಇಪ್ಪ
ಅಸಂಖ್ಯಾತ ಮಹಾ ಪ್ರಮಥಗಣಂಗಳ
ಅನುಪಮ ಪ್ರಸಾದವನು
ಕೂಡೆಸನ್ನಿಹಿತಸುಖಿಸಿದ
ಪರಿಣಾಮವನೇನೆಂದುಪಮಿಸುವೆನಯ್ಯಾ!
Art
Manuscript
Music
Courtesy:
Transliteration
Ayyā, enna mandiradalli basavaṇṇana mahānubhāvaprasādavanu
kūḍesukhisida pariṇāmavanēnendupamisuvenayyā!
Enna mandiradalli maḍivāḷayyana cidrasaprasādavanu
kūḍesukhisida pariṇāmavanēnendupamisuvenayyā!
Enna mandiradalli cannabasavaṇṇana cidrūpaprasādavanu
kūḍesukhisida pariṇāmavanēnendupamisuvenayyā!
Enna mandiradalli sid'dharāmayyana
citkalāsōṅkina śud'dhaprasādavanu
kūḍesukhisida pariṇāmavanēnendupamisuvenayyā!
Enna mandiradalli prabhudēvara cidānandaprasādavanu
kūḍesukhisida pariṇāmavanēnendupamisuvenayyā!
Enna mandiradalli ajagaṇṇana mahadānandaprasādavanu
kūḍesukhisida pariṇāmavanēnendupamisuvenayyā!
Ayyā, guruniran̄jana cannabasavaliṅgā
enna mandiradalli terahillade ippa
asaṅkhyāta mahā pramathagaṇaṅgaḷa
anupama prasādavanu
kūḍesannihitasukhisida
pariṇāmavanēnendupamisuvenayyā!