Index   ವಚನ - 734    Search  
 
ಪ್ರಸಾದವ ಬಲ್ಲವರಾರು, ಪದಾರ್ಥವ ಬಲ್ಲವರಾರು, ಪ್ರಸಾದಿಯ ಬಲ್ಲವರಾರು ಹೇಳಾ! ಪದಾರ್ಥವನಗಲಿ ಪ್ರಸಾದಿಯಿಲ್ಲ, ಪ್ರಸಾದಿಯನಗಲಿ ಪ್ರಸಾದವಿಲ್ಲ, ಈ ಭೇದವನರಿದಾನಂದಸುಖಮಯವಾಗಲರಿಯದೆ, ಪದಾರ್ಥವ ರೂಹಿಸಿ ಪ್ರಸಾದವ ರೂಹಿಸಿ ಪ್ರಸಾದಿಯೆಂದು ಭಿನ್ನವಿಟ್ಟು ಬೇರೆ ರೂಹುಳ್ಳನ್ನಕ್ಕರ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಿಜಪ್ರಸಾದವನಾರು ಬಲ್ಲರು ಹೇಳಾ.