Index   ವಚನ - 739    Search  
 
ಕೋಳಿಯಕೂಗಿನಲ್ಲಿ ಹುಟ್ಟಿದ ಬೆಕ್ಕು ಹಾಲುಕುಡಿದುದ ಕಂಡೆ. ಇರುವೆಯ ಒಡಲೊಳಗೆ ಮೂರುಲೋಕದವರು ಮರೆದುನಿಂದರು. ನಡುಮನೆಯ ಪಂಜರದೊಳಗಿರ್ದ ಹಕ್ಕಿಯ ಪಕ್ಕವ ಮುರಿದು ಪಂಜರವನುಳಿದು, ಚಂದ್ರನ ಕೂಡಿ ಇರುವೆಯ ನುಂಗಲು ಮಂಗಲಮಯ ಮೂರುತಿ ತಾನೆ ಗುರುನಿರಂಜನ ಚನ್ನಬಸವಲಿಂಗ.