Index   ವಚನ - 741    Search  
 
ಸತ್ತಹೆಣನೆದ್ದು ನೆತ್ತಿಗಣ್ಣಿಲೆ ಸುತ್ತಲಿಕ್ಕಿನೋಡಿದರೆ ಮತ್ತೊಬ್ಬರನು ಕಾಣದು ನೋಡಾ. ತಾಯಿಮಕ್ಕಳ ಬಾಳುವೆ ಉಳಿಯಿತ್ತು ಮೂವರಿಗೆ. ನಾರಿಯರ ಕೈವಿಡಿದು ಮನೆಮನೆಯೊಳುಂಡು ಮೀರಿನಿಂದನು ಗುರುನಿರಂಜನ ಚನ್ನಬಸವಲಿಂಗ ತಾನಾಗಿ.