Index   ವಚನ - 743    Search  
 
ಕೋಣನ ನೆರಳಲ್ಲಡಗಿರ್ದ ಕೋಳಿಯೆದ್ದು ಕೂಗಿತ್ತು. ಸತ್ತವರೆದ್ದು ನಿತ್ಯಕ್ಕೆ ನಡೆದರೆ ಕೆರೆ ಬತ್ತಿ ಉರಿದವು ಮೂರುಲೋಕವೆಲ್ಲ. ಕೋಳಿ ಕೋಣನ ನುಂಗಿ ಬೋಳುಕುಮ್ಮಟವ ಹೊಗಲು ಸಾಲುಮನೆಯ ಸೌರಭದ ಬೆಳಗು ಸಮರಸವನೈದಿ ಸಹಜವಾಗಿರ್ದ ಶರಣ ಗುರುನಿರಂಜನ ಚನ್ನಬಸವಲಿಂಗವಾಗಿ.