•  
  •  
  •  
  •  
Index   ವಚನ - 1304    Search  
 
ನೀರು ಕ್ಷೀರದಂತೆ ಕೂಡಿದ ಭೇದವ, ಆರಿಗೂ ಹೇಳಲಿಲ್ಲ, ಕೇಳಲಿಲ್ಲ. ಬೆಳುಗಾರ ಬೆರಸಿ ಬೆಚ್ಚ ಬಂಗಾರಕ್ಕೆ ಸಂದುಂಟೆ ಹೇಳಾ? ಉರಿಯುಂಡ ಕರ್ಪುರದ ಪರಿಯಂತಿರ್ದುದನು, ಇದಿರಿಂಗೆ ಕೊಂಡಾಡಿ ಹೇಳಲುಂಟೆ? ಅದಂತಿರಲಿ, ನಮ್ಮ ಗುಹೇಶ್ವರಲಿಂಗದ ಕಣ್ಣಮುಂದೆ, ನಿಮ್ಮ ಧರ್ಮದಿಂದಲೊಂದು ಆಶ್ಚರ್ಯವ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
Transliteration Nīru kṣīradante kūḍida bhēdava, ārigū hēḷalilla, kēḷalilla. Beḷugāra berasi becca baṅgārakke sanduṇṭe hēḷā? Uriyuṇḍa karpurada pariyantirdudanu, idiriṅge koṇḍāḍi hēḷaluṇṭe? Adantirali, nam'ma guhēśvaraliṅgada kaṇṇamunde, nim'ma dharmadindalondu āścaryava kaṇḍu badukidenu kāṇā saṅganabasavaṇṇā.
Hindi Translation जलक्षीर जैसे मिले भेद को किसी को न बताना, न पूछना खनिज लवण जोड़ने से सच्चे सोने को हानि है क्या? जलाये कपूर की स्थिति जैसे रहे, सामने प्रशंसा से कह सकते? वह रहने दे- हमारे महेश्वर लिंग की आँख के सामने, तुम्हारे धर्म में एक आश्चर्य देख जिया हूँ देख संगनबसवण्णा। Translated by: Eswara Sharma M and Govindarao B N