ಅಯ್ಯಾ, ಎನ್ನ ಸ್ಥಲವ ಆಚಾರಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಗುರುಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಶಿವಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಜಂಗಮಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಪ್ರಸಾದಲಿಂಗವಾಗಿಬಂದು
ಗರ್ಭೀಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಷಟ್‍ಸ್ಥಲವನು ಮಹಾಲಿಂಗವಾಗಿ ಬಂದು
ಗರ್ಭೀಕರಿಸಿಕೊಂಡೆ ನೀನು.
ಗುರುನಿರಂಜನ ಚನ್ನಬಸವಲಿಂಗ
ನೀನಂಗ ನಾನುಭಯಸಂಗ.
Art
Manuscript
Music
Courtesy:
Transliteration
Ayyā, enna sthalava ācāraliṅgavāgibandu garbhīkarisikoṇḍe nīnu.
Ayyā, enna sthalava guruliṅgavāgibandu garbhīkarisikoṇḍe nīnu.
Ayyā, enna sthalava śivaliṅgavāgibandu garbhīkarisikoṇḍe nīnu.
Ayyā, enna sthalava jaṅgamaliṅgavāgibandu garbhīkarisikoṇḍe nīnu.
Ayyā, enna sthalava prasādaliṅgavāgibandu
garbhīkarisikoṇḍe nīnu.
Ayyā, enna ṣaṭsthalavanu mahāliṅgavāgi bandu
garbhīkarisikoṇḍe nīnu.
Guruniran̄jana cannabasavaliṅga
nīnaṅga nānubhayasaṅga.