Index   ವಚನ - 778    Search  
 
ಸೃಷ್ಟಿ ಸ್ಥಿತಿ ಸಂಹಾರ ತಿರೋಧಾನ ಅನುಗ್ರಹವೆಂಬ ಪಂಚಕೃತ್ಯಂಗಳ ಪರಿಮಿತವನರಿಯದ ಪಂಚಾಚಾರಸ್ವರೂಪವ ಸರ್ವಾಂಗ ವೇಧಿಸಿಕೊಂಡು ಮೀರಿದ ಗತಿಯೊಳೊಪ್ಪಿ ಕಾರ್ಯಕಾರಣ ತಾನಾಗಿ, ತನ್ನ ತಾನರಿಯದಪ್ರತಿಮ ಶರಣ ಗುರುನಿರಂಜನ ಚನ್ನಬಸವಲಿಂಗವಾಗಿರ್ದ ನಿಲವ ನೋಡಾ.