ಮೂಲಜ್ಞಾನದಿಂದುದಯವಾದ
ನಿಜಾನಂದಶರಣ ಜಂಗಮಲಿಂಗಕ್ಕೆ
ಮಹಾಜ್ಞಾನಾನಂದೈಕ್ಯಪದವಲ್ಲದೆ
ನಾದಬಿಂದು ಕಲಾಯುತರುದಯೈಕ್ಯದಂತಲ್ಲ ನೋಡಾ.
ಅದೆಂತೆಂದೊಡೆ, ಸತ್ಯಗುರುವಿನಿಂದೆ ಜನಿಸಿ ನಿತ್ಯಲಿಂಗಚರಿತೆಯೊಳ್ಬೆಳೆದು
ನಿರಂಜನ ಲಿಂಗೈಕ್ಯವನರಿಯದೆ ಯೋನಿಭಾವಜನನಕ್ಕೆ ನಿಂದು
ಸಂಸಾರಭಾವಸ್ಥಿತಿಗೆ ನಿಂದು, ಮರಣಭಾವಲಯದಲ್ಲಿ ನಿಂದು,
ಕಾಟವ ಕಳೆಯದೆ ಕೋಟಲೆಗೆ ಬೀಳುವ ಮೋಟರಿಗೆ
ಜಂಗಮವೆನ್ನಲು ಅಬದ್ಧ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Mūlajñānadindudayavāda
nijānandaśaraṇa jaṅgamaliṅgakke
mahājñānānandaikyapadavallade
nādabindu kalāyutarudayaikyadantalla nōḍā.
Adentendoḍe, satyaguruvininde janisi nityaliṅgacariteyoḷbeḷedu
niran̄jana liṅgaikyavanariyade yōnibhāvajananakke nindu
sansārabhāvasthitige nindu, maraṇabhāvalayadalli nindu,
kāṭava kaḷeyade kōṭalege bīḷuva mōṭarige
jaṅgamavennalu abad'dha kāṇā
guruniran̄jana cannabasavaliṅgā.