Index   ವಚನ - 785    Search  
 
ಕಾಯವನೊಳಗಿಟ್ಟ ಶರಣಂಗೆ ಕ್ರಿಯೋಪಚಾರದ ಕುರುಹನರಿಯಬೇಕೆಂಬುದೇನೋ! ಮನವನೊಳಗಿಟ್ಟ ಶರಣಂಗೆ ವಿವೇಕದುಪಚಾರದ ಕುರುಹನರಿಯಬೇಕೆಂಬುದೇನೋ! ಪ್ರಾಣವನೊಳಗಿಟ್ಟ ಶರಣಂಗೆ ನಾನು ನೀನೆಂದರಿವುದೇನೋ! ಭಾವವನೊಳಗಿಟ್ಟ ಶರಣಂಗೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಐಕ್ಯವನರಿಯಬೇಕೆಂಬುದೇನೋ