Index   ವಚನ - 787    Search  
 
ಕಣ್ಣಿನಿಂದ ಕಾಲಕಳೆದವರು, ಕಣ್ಣಿನಿಂದ ಕಣ್ಣಕಳೆದವರು, ಕಣ್ಣಿನಿಂದ ಕಿವಿಯಕಳೆದವರು, ಕಣ್ಣಿನಿಂದ ಮೂಗಕಳೆದವರು, ಕಣ್ಣನಿಂದ ಜಿಹ್ವೆಯ ಕಳೆದವರು, ಕಣ್ಣಿನಿಂದ ಸರ್ವಾಂಗವನು ಕಳೆದವರು. ಕಣ್ಣನಿಂದ ಗುರುನಿರಂಜನ ಚನ್ನಬಸವಲಿಂಗವೆಂಬ ನಾಮವ ಕಳೆದವರು ಶರಣರು.