Index   ವಚನ - 791    Search  
 
ನಿಜಲಿಂಗೈಕ್ಯ ನಿಜಲಿಂಗೈಕ್ಯರೆಂದು ನುಡಿದುಕೊಂಬ ಕಡುಮಂದಮತಿಗಳನೇನೆಂಬೆನಯ್ಯಾ. ಸತ್ವ-ರಜ-ತಮ ಗಿರಿಯ ಗವಿಯ ಹೊಕ್ಕು ಗಬ್ಬುಗೊಂಡು ಗರಳಘಾತದೊಳು ಮುಳುಗಿದ ವಿಹಂಗಗತಿಗಳೆತ್ತಬಲ್ಲರಯ್ಯಾ ನಿಮ್ಮ ಶರಣನ ಲಿಂಗೈಕ್ಯದ ಘನವ! ಪತಂಗ ಜಲದಲ್ಲಿ ಮುಳುಗಬಾರದು, ಅನಿಮಿಷನು ಅಗ್ನಿಯಲ್ಲಿ ಮುಳುಗಬಾರದು ಗುರುನಿರಂಜನ ಚನ್ನಬಸವಲಿಂಗ ನಿಮ್ಮ ನೀವೇ ಬಲ್ಲಿರಿ.