Index   ವಚನ - 795    Search  
 
ಲಿಂಗವಾದ ಶರಣನಂಗದಲ್ಲಿ ದುಸ್ಸಂಗ ದುರ್ಗುಣ ದುಶ್ಚೇಷ್ಟೆಗಳುಂಟೆ? ಕುಟಿಲ ಕುಯುಕ್ತಿ ಹಟಕರ್ಮ ಹರಕಮಾತುಗಳುಂಟೆ? ಹೆಣ್ಣುಭೂತ ಮಣ್ಣುಭೂತ ಹೊನ್ನು ಭೂತದಾಹುತಿಯಾಗಿ ಹೋಗಲುಂಟೆ? ಸತ್ತು ಬಂದು ಸುತ್ತಿಮುಳುಗುವ ನಿತ್ಯಲಿಂಗೈಕ್ಯನ ಘನವನು ಗುರುನಿರಂಜನ ಚನ್ನಬಸವಲಿಂಗದಲ್ಲಿಯೇ ಕಾಣಲಾಯಿತ್ತು.