Index   ವಚನ - 806    Search  
 
ಚಿತ್ತವನಡಗಿಸಿ ಬಂದವರು ಭಕ್ತೈಕ್ಯಪದಸ್ಥರಹರೆ? ಬುದ್ಧಿಯನಡಗಿಸಿಬಂದವರು ಮಹೇಶ್ವರೈಕ್ಯಪದಸ್ಥರಹರೆ? ಅಹಂತೆಯನಡಗಿಸಿ ಬಂದವರು ಪ್ರಸಾದಿಯೈಕ್ಯಪದಸ್ಥರಹರೆ? ಮನವನಡಗಿಸಿ ಬಂದವರು ಪ್ರಾಣಲಿಂಗಿಯೈಕ್ಯಪದಸ್ಥರಹರೆ? ಜ್ಞಾನವನಡಗಿಸಿ ಬಂದವರು ಶರಣೈಕ್ಯಪದಸ್ಥರಹರೆ? ಭಾವವನಡಗಿಸಿ ಬಂದವರು ನಿಜೈಕ್ಯಪದಸ್ಥರಹರೆ? ಗುರುನಿರಂಜನ ಚನ್ನಬಸವಲಿಂಗದಲ್ಲಿ.