Index   ವಚನ - 812    Search  
 
ತನುವಿಲ್ಲದ ಘನಕ್ಕೆ ತನುವ ಸಂಬಂಧಿಸಿದರೆ ಒಂದನೆಯ ಪಾತಕ. ಮನವಿಲ್ಲದ ಘನಕ್ಕೆ ಮನವ ಸಂಬಂಧಿಸಿದರೆ ಎರಡನೆಯ ಪಾತಕ. ಧನವಿಲ್ಲದ ಘನಕ್ಕೆ ಧನವ ಸಂಬಂಧಿಸಿದರೆ ಮೂರನೆಯ ಪಾತಕ. ಭಾವವಿಲ್ಲದ ಘನಕ್ಕೆ ಭಾವ ಸಂಬಂಧಿಸಿದರೆ ನಾಲ್ಕನೆಯ ಪಾತಕ. ತಾನಿಲ್ಲದ ಘನಕ್ಕೆ ತನ್ನ ಸಂಬಂಧಿಸಿದರೆ ಐದನೆಯ ಪಾತಕ. ಇಂತು ಪಂಚವಿಧವನರಿಯದೆ ಪಂಚಬ್ರಹ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಡಗಿರ್ದ ನಿಜಕ್ಕೆ ಗಜಬಜೆಯಗಲಸಿದರೆ ಪಂಚಮಹಾಪಾತಕದೊಳಗಾಗುವರು.