Index   ವಚನ - 815    Search  
 
ಭಕ್ತಿಯಲ್ಲಿ ಬಂದು, ಜ್ಞಾನದಲ್ಲಿ ಬೆಳೆದು, ವೈರಾಗ್ಯದಲ್ಲಿ ಅಡಗಿರ್ದ ಅಪ್ರತಿಮಶರಣ. ಅರಿದು ಮಾಡುವನಲ್ಲ, ಹರಿದುಬಿಟ್ಟವನಲ್ಲ, ತೋರಿಸಿಕೊಂಬುವನಲ್ಲ. ಲೋಕದೊಳಗಿರ್ದು ಲಿಂಗದೊಳಗಿರ್ದ ನಿಲವನಾರು ಬಲ್ಲರು ಹೇಳಾ! ಬೇಕುಬೇಡೆನ್ನದ ಮೂಕಮಾತನಲ್ಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.