ಶರಧಿಯ ಜಲವು ಒಂದಾಣತಿಯಿಂದ ಆಕಾಶದಲ್ಲಿ ಮೇಘವಾಗಿ
ಸುರಿದಜಲ ಭೂಮಿವಿಡಿದು, ನದಿಗೂಡಿ ಹರಿದು
ಸಮುದ್ರವನೊಡವೆರೆದಂತೆ
ಮಹಾಘನ ಸಮುದ್ರದಿಂದಾದ ಚಿದಾನಂದ ಶರಣ
ತನ್ನ ವಿನೋದಕಾರಣ ತನುವಿಡಿದು
ಸರ್ವಾಚಾರಸಂಪತ್ತಿನೊಳುಬೆರೆದು
ಮೀರಿದಕ್ರಿಯೆಯಿಂದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸಮರಸಾನಂದವ ಏನೆಂದುಪಮಿಸಬಹುದು.
Art
Manuscript
Music
Courtesy:
Transliteration
Śaradhiya jalavu ondāṇatiyinda ākāśadalli mēghavāgi
suridajala bhūmiviḍidu, nadigūḍi haridu
samudravanoḍaveredante
mahāghana samudradindāda cidānanda śaraṇa
tanna vinōdakāraṇa tanuviḍidu
sarvācārasampattinoḷuberedu
mīridakriyeyinde guruniran̄jana cannabasavaliṅgadalli
samarasānandava ēnendupamisabahudu.