ಗುರುವಿಲ್ಲದ ಶಿಷ್ಯ ಕರವಿಲ್ಲದ ಲಿಂಗವಹಿಡಿದು
ಕಂಗಳಿಲ್ಲದೆ ನೋಡಿ ಕರುಳಿಲ್ಲದೆ ಪೂಜಿಸಿ,
ಭಾವವಿಲ್ಲದೆ ಬೆರೆಸಿದ ಬಳಿಕ
ಮಾಡಬಾರದ ಮಾಟ ನೋಡಬಾರದ ನೋಟ
ಕೂಡಬಾರದ ಕೂಟ ನಿಮ್ಮೊಳಗಾಯಿತ್ತು,
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Guruvillada śiṣya karavillada liṅgavahiḍidu
kaṅgaḷillade nōḍi karuḷillade pūjisi,
bhāvavillade beresida baḷika
māḍabārada māṭa nōḍabārada nōṭa
kūḍabārada kūṭa nim'moḷagāyittu,
guruniran̄jana cannabasavaliṅgā.