Index   ವಚನ - 848    Search  
 
ಅನಂತಜನ್ಮ ತಿರುಗಿ ಬಂದ ಮನವು ತನ್ನ ವಾಸವಾಗಿರ್ಪುದು. ಆ ಮನವ ಮಹದಲ್ಲಿರಿಸಿ ಮರೆದುದೇ ನಿಜೈಕ್ಯ. ಆ ಮನವ ಸಂಸಾರದಲ್ಲಿರಿಸಿ ಮರೆದುದೇ ನರಕ. ನೀರು ತುಹಿಲ ನೆರೆದರೆ ಬಿಳ್ಪಾಗುವುದು. ನೀರು ಮಸಿಯ ನೆರೆದರೆ ಕಪ್ಪಾಗುವುದು. ಇದನರಿದು ಎನಗುಳ್ಳುದೊಂದು ಮನ, ಆ ಮನವನಪ್ಪಿ ಗುರುನಿರಂಜನ ಚನ್ನಬಸವಲಿಂಗದೊಳಗೆ ಪರಿಣಾಮಿಯಾಗಿರ್ದೆನು.