ಅಯ್ಯಾ, ನಿಮ್ಮಂಗ ನಾನಾಗಿ ನಿನ್ನಿಂದೆ ಕಡೆಗಿಟ್ಟು
ಮಾಯೆಯ ಕಾವಲವ ಹೊಗಲೆನಗೆ ವಿಧಿಯೆ?
ಅವಳ ಕಲ್ಪನೆಯೊಳೊಂದಿ ನಡೆಯಲೆನಗೆ ಅಭಾಗ್ಯವೆ ಹೇಳಾ!
ಅವಳ ಸಂಸಾರಸುಖವನರಿಯಲೆನಗೆ ದುರ್ಮರುಳವೆ ನೋಡಾ.
ಗುರುನಿರಂಜನ ಚನ್ನಬಸವಲಿಂಗಾ
ನೀವಿರ್ದಂತೆ ನಾನಿಪ್ಪೆ ನಿಮ್ಮೊಳಗೆನ್ನ ಮರೆದು.
Art
Manuscript
Music
Courtesy:
Transliteration
Ayyā, nim'maṅga nānāgi ninninde kaḍegiṭṭu
māyeya kāvalava hogalenage vidhiye?
Avaḷa kalpaneyoḷondi naḍeyalenage abhāgyave hēḷā!
Avaḷa sansārasukhavanariyalenage durmaruḷave nōḍā.
Guruniran̄jana cannabasavaliṅgā
nīvirdante nānippe nim'moḷagenna maredu.
ಸ್ಥಲ -
ಐಕ್ಯನ ಮಾಹೇಶ್ವರಸ್ಥಲ