Index   ವಚನ - 886    Search  
 
ಗಂಡನ ಸುಖದುಃಖವನರಿಯದ ದಿಂಡಿಯದೊತ್ತು, ಅವಳ ಉಪಚಾರ ಕಂಡಿತ್ತು ; ಅವಳ ಮೋಹ ಕಂಡಿತ್ತು. ಅವಳನು ಪುರುಷಸಹಗಮನಿಯರ ಸರಿಯೆನಲುಂಟೆ? ಮತ್ತೆ ಅಂಗದಮೇಲೆ ಲಿಂಗವ ಧರಿಸಿ ಸಂಗಸಂಯೋಗ ಸಮರಸವನರಿಯದ ಭಂಗಗೇಡಿ ಮನುಜನ ಕ್ರಿಯೆ ಕಂಡಿತ್ತು, ಅವನ ಜ್ಞಾನ ಕಂಡಿತ್ತು, ಆ ಪ್ರಾಣಿಯನು ಲಿಂಗಸಹಭೋಜನ ಸಮಸುಖ ಸಮರಸಾನಂದರುಗಳಿಗೆ ಸರಿಯೆನಲುಂಟೆ? ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮೈಕ್ಯ ಪ್ರಸಾದಿಗೆ ನಮೋ ನಮೋ ಎನುತಿರ್ದೆನು.