Index   ವಚನ - 895    Search  
 
ಇಕ್ಷುವಿನ ಭಾವ ತಪ್ಪಿ ಗುರುವಿನೊಳೈಕ್ಯವೆಂಬುದೊಂದು ಹುಸಿ, ಚಂದನದ ಭಾವ ತಪ್ಪಿ ಲಿಂಗದೊಳೈಕ್ಯವೆಂಬುದೊಂದು ಹುಸಿ, ಹೇಮದ ಭಾವ ತಪ್ಪಿ ಜಂಗಮದೊಳೈಕ್ಯವೆಂಬುದೊಂದು ಹುಸಿ, ಅದೆಂತೆಂದೊಡೆ, ಶುದ್ಧ ಸಿದ್ಧ ಪ್ರಸಿದ್ಧ ಸಂಬಂಧವಿಲ್ಲವಾಗಿ ಗುರುನಿರಂಜನ ಚನ್ನಬಸವಲಿಂಗವೆಂಬ ಮಹಾಘನ ಪ್ರಸಾದದೊಳೈಕ್ಯವೆಂದಿಗೂ ಇಲ್ಲ ನೋಡಾ.