Index   ವಚನ - 907    Search  
 
ಅರಿಯಬಾರದ ಘನವನರಿವ ಪರಿಯೆಂತು ಹೇಳಾ! ಕುರುಹಿಟ್ಟು ಕೂಡುವರ ಕಾಣೆ ಮೂರುಲೋಕದೊಳಗೆ. ಅರಿಯಬಾರದುದನರಿದು, ಹರಿಯಬಾರದುದ ಹರಿದು, ಮರೆಯಬಾರದುದ ಮರೆದು ನೆರೆಯಬಾರದುದ ನೆರೆದು ನಿಜವಾದರು ನಿಮ್ಮ ಶರಣರು ಗುರುನಿರಂಜನ ಚನ್ನಬಸವಲಿಂಗಾ.