Index   ವಚನ - 924    Search  
 
ಬಸವಣ್ಣನ ಕುರಣಜಲದಲ್ಲಿ ಮುಳುಗಿ ಕಾಯಮುಕ್ತನೆನಿಸಿದೆ. ಚನ್ನಬಸವಣ್ಣನ ವಿನಯಜಲದಲ್ಲಿ ಮುಳುಗಿ ಮನೋಮುಕ್ತನೆನಿಸಿದೆ. ಪ್ರಭುವಿನ ಸಮತಾಜಲದಲ್ಲಿ ಮುಳುಗಿ ಪ್ರಾಣಮುಕ್ತನೆನಿಸಿದೆ. ತ್ರಿವಿಧೋದಕವೊಂದಾದ ಗುರುನಿರಂಜನ ಚನ್ನಬಸವಲಿಂಗಾ ಸಂಗಪರಮಾನಂದ ಪಾದೋದಕದಲ್ಲಿ ಮುಳುಗಿ ಅರಿಯದಿರ್ದನುಪಮನೆನಿಸಿದೆನು.