Index   ವಚನ - 929    Search  
 
ಸುಳುಹಿಲ್ಲದ ಕೇರಿಯೊಳಗೆ ಸುಳಿದಾಡುವ ಕುಲಗೇಡಿಗಳ ನೋಡಾ! ಕುಲಗೇಡಿಗಳ ಕೂಡಿ ನೆಲೆಗಂಡು ಲಲನೆಯರ ಮೆಚ್ಚಿಗೆಯೊಳು ನಿಂದು ಗುರುನಿರಂಜನ ಚನ್ನಬಸವಲಿಂಗವ ಕೂಡಿ ಸಂಗವಳಿದು ಸಹಜವಾದುದು ಸ್ವಯಮೆಂಬೆ.