Index   ವಚನ - 939    Search  
 
ಕಾಯ ಮನ ಪ್ರಾಣ ಭಾವ ಜ್ಞಾನ ನಾಮ ಸೀಮೆ ನಿರಂಜನ ಶರಣನು ಮಾಡಲಿಲ್ಲ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ. ನೋಡಲಿಲ್ಲ ಸ್ತೋತ್ರ ಜಪ ಮಂತ್ರ ಧ್ಯಾನವಿಟ್ಟು ಪ್ರಾಣಲಿಂಗವ. ಕೂಡಲಿಲ್ಲ ನಿರಂಜನ ಪೂಜೆ ಮನೋರ್ಲಯವಿಟ್ಟು ಭಾವಲಿಂಗವ. ಎಂತಿರ್ದಂತೆ ಗುರುನಿರಂಜನ ಚನ್ನಬಸವಲಿಂಗವ ತಾನಾಗಿ ಬಯಲಾದುದನೇನೆಂಬೆ