ಘನ ಮನವನೊಳಕೊಂಡು, ಮನ ಘನವನೊಳಕೊಂಡು,
ಆ ಘನಮನವ ನಿಜವೊಳಕೊಂಡು,
ಆ ನಿಜವು ನಿರ್ವಯಲಾದುದು
ನೀನು ನಾನೆಂಬ ನಿಲುವಿಗೆ ಸಾಧ್ಯವಾಗಿಹುದು
ಗುರುನಿರಂಜನ ಚನ್ನಬಸವಲಿಂಗದೊಳಗೆ.
Art
Manuscript
Music
Courtesy:
Transliteration
Ghana manavanoḷakoṇḍu, mana ghanavanoḷakoṇḍu,
ā ghanamanava nijavoḷakoṇḍu,
ā nijavu nirvayalādudu
nīnu nānemba niluvige sādhyavāgihudu
guruniran̄jana cannabasavaliṅgadoḷage.