Index   ವಚನ - 981    Search  
 
ತನುರುಚಿಯ ಮನದಲ್ಲರಿದು, ಮನರುಚಿಯ ತನುವಿನಲ್ಲರಿದು, ತನುಮನರುಚಿಯ ಆತ್ಮನಲ್ಲರಿದು ಅವಧರಿಸಿಕೊಂಡ ಬಳಿಕ ಅಂತಿಂತೆಂಬುದು ಅಧಮನುಡಿ ಕಾಣಾ. ಅರಿಯದಿರ್ದಡೆ ಬಾರದು ಮಾಣಾ. ದ್ವಂದ್ವಭಾವದ ಸಂದಿನ ಬೇನೆಯ ಕಂಡು ಹಿಂದುಮುಂದಾಗಿ ನಾಚಿತೆನ್ನ ಮನ. ಬೆಂದೊಡಲ ಬಾಧೆಯ ಮುಂದಿರಿಸದಿರು ನಮ್ಮ ಗುರುನಿರಂಜನ ಚನ್ನಬಸವಲಿಂಗ ಶರಣಚರಿತೆಯ.